ನವದೆಹಲಿ: “ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ” ವಿಮಾನಯಾನ ಕಾವಲು ಸಂಸ್ಥೆ ಬಿಸಿಎಎಸ್ ತನ್ನ ಭದ್ರತಾ ಅನುಮತಿಯನ್ನ ರದ್ದುಗೊಳಿಸಿದ್ದನ್ನ ಪ್ರಶ್ನಿಸಿ ಟರ್ಕಿ ಮೂಲದ ಕಂಪನಿ ಸೆಲೆಬಿ ಸಲ್ಲಿಸಿದ್ದ ಮೇಲ್ಮನವಿಯನ್ನ ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮೇ 23 ರಂದು ತೀರ್ಪನ್ನು ಕಾಯ್ದಿರಿಸಿದ ನಂತರ ನ್ಯಾಯಮೂರ್ತಿ ಸಚಿನ್ ದತ್ತ ಅರ್ಜಿಗಳನ್ನ ವಜಾಗೊಳಿಸಿದರು.
ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸಿದ ಮತ್ತು ನೆರೆಯ ದೇಶದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯನ್ನು ಖಂಡಿಸಿದ ಕೆಲವು ದಿನಗಳ ನಂತರ, ಮೇ 15ರಂದು ನಾಗರಿಕ ವಿಮಾನಯಾನ ಸುರಕ್ಷತಾ ಬ್ಯೂರೋ (BCAS) ಭದ್ರತಾ ಅನುಮತಿಯನ್ನ ರದ್ದುಗೊಳಿಸಿತು.
‘ಎಲ್ಲಾ ಹಣ ಕೆಲವೇ ಕೆಲವು ಶ್ರೀಮಂತರ ಕೈ ಸೇರ್ತಿದೆ’ : ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದ ಸಚಿವ ‘ನಿತಿನ್ ಗಡ್ಕರಿ’