ನವದೆಹಲಿ:ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ತುಹಿನ್ ಕಾಂತಾ ಪಾಂಡೆ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿ ಸರ್ಕಾರ ನೇಮಿಸಿದೆ.
ರಾಜೀವ್ ಗೌಬಾ ಅವರ ನಂತರ ಆಗಸ್ಟ್ ನಲ್ಲಿ ಭಾರತದ ಹೊಸ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ನೇಮಕಗೊಂಡ ಟಿ.ವಿ.ಸೋಮನಾಥನ್ ಅವರ ಸ್ಥಾನಕ್ಕೆ ಪಾಂಡೆ ಅವರನ್ನು ನೇಮಿಸಲಾಗಿದೆ.
ಪಾಂಡೆ ಅವರು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿಯಾಗಿದ್ದರು.
ಒಡಿಶಾ ಕೇಡರ್ನ 1987ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅವರು 2019ರ ಅಕ್ಟೋಬರ್ನಲ್ಲಿ ಡಿಐಪಿಎಎಂನ ಉಸ್ತುವಾರಿ ವಹಿಸಿಕೊಂಡಿದ್ದರು