ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿಷಯದಲ್ಲಿ ಮತ್ತೊಮ್ಮೆ ಕಠಿಣ ನಿಲುವು ತಳೆದಿದ್ದಾರೆ. ಕದನ ವಿರಾಮದ ನಂತರವೂ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶಗಳ ಮೇಲೆ ಭಾರಿ ಪ್ರಮಾಣದ ಆರ್ಥಿಕ ದಂಡ ಹೇರುವುದಾಗಿ ಅವರು ಎಚ್ಚರಿಸಿದ್ದಾರೆ.
ಇರಾನ್‌ಗೆ ಆಯುಧಗಳನ್ನು ಸರಬರಾಜು ಮಾಡುವ ರಾಷ್ಟ್ರಗಳಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಶೇ. 50 ರಷ್ಟು ಸುಂಕ (Tariffs) ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಕದನ ವಿರಾಮದ ನಂತರದ ಕಟ್ಟುನಿಟ್ಟಿನ ಕ್ರಮ: ಪ್ರಾದೇಶಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಮರುಸಂಗ್ರಹಿಸುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಟ್ರಂಪ್ ಅವರ ಈ ‘ಆರ್ಥಿಕ ಯುದ್ಧ’ದ ಎಚ್ಚರಿಕೆಯು ಇರಾನ್‌ನೊಂದಿಗೆ ರಕ್ಷಣಾ ಒಪ್ಪಂದ ಹೊಂದಿರುವ ರಾಷ್ಟ್ರಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದು ಜಾಗತಿಕ ವ್ಯಾಪಾರ ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.








