ವಿಜಯಪುರ : ದೇಶದಲ್ಲಿ ರೈಲು ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಕರ್ನಾಟಕದಲ್ಲೂ ರೈಲು ಹಳಿ ತಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರದ ಭೀಮಾ ನದಿ ಸೇತುವೆ ಬಳಿ ಲೋಕೋ ರೈಲು ಹಳಿತಪ್ಪಿದ್ದು, ರೈಲು ಹಳಿ ತಪ್ಪಿದ ಪರಿಣಾಮ ಈ ಭಾಗದ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ರೈಲು
ಮೈಸೂರು-ಪಂಢರಪುರ, ಫಂಡರಪುರ-ಮೈಸೂರು, ಪಂಢರಾಪುರ-ವಿಜಯಪುರ ನಡುವಿನ ರೈಲುಗಳ ಸಂಚಾರ ರದ್ದಾಗಿದ್ದು, ರೈಲು ಪ್ರಯಾಣಿಕರು ಪರದಾಡುವಂತಾಗಿದೆ.