ಕೋಲ್ಕತ್ತಾ : ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಸೇತುವೆ ಕುಸಿದು ಮಗು ಸೇರಿದಂತೆ 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ಸೇತುವೆ ಕುಸಿತದಿಂದಾಗಿ ಮಗು ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಮಿರಿಕ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಜಿಲ್ಲಾ ಪಟ್ಟಣಗಳು ಮತ್ತು ಪ್ರವಾಸಿ ತಾಣಗಳಾದ ಮಿರಿಕ್ ಮತ್ತು ಕುರ್ಸಿಯೊಂಗ್ ಅನ್ನು ಸಂಪರ್ಕಿಸುವ ದುಡಿಯಾ ಐರನ್ ಸೇತುವೆ ಕೂಡ ಕುಸಿದಿದೆ.
ಕುರ್ಸಿಯೊಂಗ್ ಬಳಿಯ ರಾಷ್ಟ್ರೀಯ ಹೆದ್ದಾರಿ 110 ರ ಉದ್ದಕ್ಕೂ ಇರುವ ಹುಸೇನ್ ಖೋಲಾದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತ ವರದಿಯಾಗಿದೆ.
ಡಾರ್ಜಿಲಿಂಗ್‌ನ ನೆರೆಯ ಜಿಲ್ಲೆಯಾದ ಉತ್ತರ ಬಂಗಾಳದ ಅಲಿಪುರ್ದೂರ್‌ನಲ್ಲಿ ಸೋಮವಾರ ಬೆಳಿಗ್ಗೆಯವರೆಗೆ ಭಾರೀ ಮಳೆ ಮುಂದುವರಿಯಲಿದೆ ಎಂದು ಐಎಂಡಿ ತನ್ನ ಬುಲೆಟಿನ್‌ನಲ್ಲಿ ಉಲ್ಲೇಖಿಸಿದೆ.