ಕಾಂಗೋ : ಕಾಂಗೋದಲ್ಲಿ ನಡೆದ ಎರಡು ಪ್ರತ್ಯೇಕ ದೋಣಿ ಅಪಘಾತಗಳಲ್ಲಿ ಕನಿಷ್ಠ 193 ಜನರು ಸಾವನ್ನಪ್ಪಿದ್ದಾರೆ.
ಈಕ್ವೇಟರ್ ಪ್ರಾಂತ್ಯದಿಂದ 150 ಕಿ.ಮೀ ದೂರದಲ್ಲಿ ಈ ಅಪಘಾತಗಳು ಸಂಭವಿಸಿವೆ. ಗುರುವಾರ ಸಂಜೆ, 500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡು 107 ಜನರು ಸಾವನ್ನಪ್ಪಿದ್ದಾರೆ.
146 ಜನರು ಕಾಣೆಯಾಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ. ಬುಧವಾರ ನಡೆದ ಮತ್ತೊಂದು ಅಪಘಾತದಲ್ಲಿ, ಮೋಟಾರು ದೋಣಿ ಮಗುಚಿ 86 ಜನರು ಸಾವನ್ನಪ್ಪಿದ್ದಾರೆ.