ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ವಿಜಯ್ ರಂಗರಾಜು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ.
ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಒಂದು ವಾರದ ಹಿಂದೆ ಹೈದರಾಬಾದ್ ನಲ್ಲಿ ಚಿತ್ರೀಕರಣದ ವೇಳೆ ವಿಜಯ್ ರಂಗರಾಜು ಅಸ್ವಸ್ಥಗೊಂಡಿದ್ದರು. ನಂತರ ಅವರು ಚಿಕಿತ್ಸೆಗಾಗಿ ಚೆನ್ನೈ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಜಯ್ ರಂಗರಾಜು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಹೆಸರುವಾಸಿಯಾದ ಅವರು ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿದರು.1994ರಲ್ಲಿ ತೆರೆಕಂಡ ‘ಭೈರವ ದ್ವೀಪಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಯಜ್ಞಂನಲ್ಲಿನ ಅವರ ಅಭಿನಯವು ಅವರಿಗೆ ಗಮನಾರ್ಹ ಮನ್ನಣೆಯನ್ನು ತಂದುಕೊಟ್ಟಿತು, ಅಲ್ಲಿ ಅವರು ನಾಯಕನಾಗಿ ನಟಿಸಿದ ಗೋಪಿಚಂದ್ ಎದುರು ಖಳನಾಯಕನಾಗಿ ಅಭಿನಯಿಸಿದರು. ತೆಲುಗು ಮಾತ್ರವಲ್ಲದೆ, ತಮಿಳು ಮತ್ತು ಮಲಯಾಳಂನಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
994 ರಲ್ಲಿ ಭೈರವ ದ್ವೀಪ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಪ್ರವೇಶಿಸಿದ ವಿಜಯ್ ರಂಗರಾಜು ಅವರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ವಿಲನ್ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಜನಮನ್ನಣೆ ಗಳಿಸಿದರು.
ವಿಜಯ್ ರಂಗರಾಜು ಅವರ ನಿಜವಾದ ಹೆಸರು ಉದಯ ರಾಜ್ ಕುಮಾರ್. ಅವರು ಮೋಹನ್ ಲಾಲ್ ಅಭಿನಯದ ಮಲಯಾಳಂ ಚಿತ್ರ ‘ವಿಯೆಟ್ನಾಂ ಕಾಲೋನಿ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದ ಯಶಸ್ಸಿನೊಂದಿಗೆ ಅವರಿಗೆ ಸತತ ಅವಕಾಶಗಳು ಬಂದವು. ಆ ವೇಳೆ ತೆಲುಗಿನಲ್ಲಿ ‘ಭೈರವದ್ವೀಪಂ’ ಚಿತ್ರದಲ್ಲಿ ವಿಲನ್ ಆಗಿ ನಟಿಸುವ ಅವಕಾಶ ಸಿಕ್ಕಿತು. ಆ ಚಿತ್ರದ ಮೂಲಕ ತೆಲುಗು ತೆರೆಗೆ ಪರಿಚಯವಾದರು. ಈಗಾಗಲೇ ಚಿತ್ರರಂಗದಲ್ಲಿ ಉದಯ ರಂಗರಾಜು ಎಂಬ ನಟ ಇದ್ದ ಕಾರಣ, ತಮ್ಮ ಹೆಸರನ್ನು ವಿಜಯ ರಂಗರಾಜು ಎಂದು ಬದಲಾಯಿಸಿಕೊಂಡಿದ್ದರು.