ನವದೆಹಲಿ: ತಿರುಪತಿ ಲಡ್ಡು ಕಲಬೆರಕೆ ವಿಷಯದ ಬಗ್ಗೆ ಹೆಚ್ಚುತ್ತಿರುವ ಬಿಸಿಯ ಮಧ್ಯೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾನುವಾರ ಪ್ರಧಾನಿ ಮೋದಿಗೆ ಪತ್ರ ಬರೆದು, ಮಧ್ಯಪ್ರವೇಶಿಸಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನ ಖಂಡಿಸುವಂತೆ ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಸಿಎಂ ಚಂದ್ರಬಾಬು ನಾಯ್ಡು ಅವರು ಕೇವಲ ರಾಜಕೀಯ ಉದ್ದೇಶಗಳಿಗಾಗಿ ಕೋಟ್ಯಂತರ ಜನರ ನಂಬಿಕೆಗಳನ್ನ ನೋಯಿಸುವಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ಜಗನ್ ಆರೋಪಿಸಿದ್ದಾರೆ. ನಾಯ್ಡು ಅವರು ತಿರುಮಲ ತಿರುಪತಿ ದೇವಸ್ಥಾನಂ (TTD) ಪಾವಿತ್ರ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಎಂಟು ಪುಟಗಳ ಪತ್ರದಲ್ಲಿ, ತುಪ್ಪವನ್ನು ಸ್ವೀಕರಿಸಲು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ರಕ್ಷಕ ತಿರುಮಲ ತಿರುಪತಿ ದೇವಸ್ಥಾನಂ (TTD) ನಲ್ಲಿ ಕೈಗೊಂಡ ಪ್ರಕ್ರಿಯೆಯನ್ನ ಅವರು ವಿವರಿಸಿದ್ದಾರೆ. ನಾಯ್ಡು ಅವರ ಕ್ರಮಗಳು ಸಿಎಂ ಕಚೇರಿಯ ಘನತೆಯನ್ನ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿ ಪ್ರತಿಯೊಬ್ಬರ ಘನತೆಯನ್ನು, ಟಿಟಿಡಿಯ ಪಾವಿತ್ರ್ಯತೆ ಮತ್ತು ಅದರ ಆಚರಣೆಗಳನ್ನು ಕಡಿಮೆ ಮಾಡಿದೆ ಎಂದು ಜಗನ್ ಆರೋಪಿಸಿದರು.
BREAKING : ಜನಾಂಗೀಯ ತಾರತಮ್ಯ, ವೀಸಾ ಉಲ್ಲಂಘನೆ : ‘ನೆಟ್‍ಫ್ಲಿಕ್ಸ್’ ವಿರುದ್ಧ ‘ಕೇಂದ್ರ ಸರ್ಕಾರ’ ತನಿಖೆ
BREAKING : ಜನಾಂಗೀಯ ತಾರತಮ್ಯ, ವೀಸಾ ಉಲ್ಲಂಘನೆ : ‘ನೆಟ್‍ಫ್ಲಿಕ್ಸ್’ ವಿರುದ್ಧ ‘ಕೇಂದ್ರ ಸರ್ಕಾರ’ ತನಿಖೆ
BREAKING: ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ‘ಉದಯ್ ಭಾನು ಚಿಬ್’ ನೇಮಕ