ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಟಿಪ್ಪರ್ ಚಾಲಕ ಎಡವಟ್ಟು ಮಾಡಿಕೊಂಡಿದ್ದು, ಟಿಪ್ಪರ್ ಲಾರಿಗೆ ವಿದ್ಯುತ್ ತಂತಿ ಸಿಲುಕಿದ ಪರಿಣಾಮ 20 ಕ್ಕೂ ಹೆಚ್ಚು ಲೈಟ್ ಕಂಬಗಳು ರಸ್ತೆ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಚಿಕ್ಕಬಾಣವಾರ-ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಈ ಘಟನ ನಡೆದಿದೆ. ಟಿಪ್ಪರ್ ಲಾರಿಯಲ್ಲಿ ಹೈಡ್ರಾಲಿಕ್ ಸಾಗಿಸುತ್ತಿದ್ದ ವೇಳೆ ಟಾಪ್ ಗೆ ವಿದ್ಯುತ್ ತಂತಿ ಸಿಲುಕಿದ್ರೂ ನಿರ್ಲಕ್ಷ್ಯ ತೋರಿದ ಚಾಲಕ ಹಾಗೇ ಲಾರಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ 20 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿಬಿದ್ದಿವೆ.
ರಸ್ತೆಯಲ್ಲಿ ಯಾರು ಇಲ್ಲದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಸದ್ಯ ಲೈಟ್ ಕಂಬಗಳನ್ನು ತೆರವು ಮಾಡಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.