ಅಹಮದಾಬಾದ್ : ಭಾರತೀಯ ವೈದ್ಯಕೀಯ ಸಂಘದ (IMA) ಗುಜರಾತ್ ಘಟಕದ ಅಧ್ಯಕ್ಷ ಡಾ. ಮೆಹುಲ್ ಶಾ ಅವರು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಿಂದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರಸ್ತುತ, ಮೃತರ ಹೆಸರುಗಳನ್ನ ದೃಢಪಡಿಸಲಾಗಿಲ್ಲ. ಸುಮಾರು 45 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಅಂದ್ಹಾಗೆ, ಇಂದು ಮಧ್ಯಾಹ್ನ ಅಹಮದಾಬಾದ್’ನ ಮೇಘನಾನಿಗರ್ ಪ್ರದೇಶದಲ್ಲಿ ಒಂದು ದೊಡ್ಡ ವಿಮಾನ ಅಪಘಾತ ಸಂಭವಿಸಿದೆ. ಲಂಡನ್’ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತ್ರ ಇದ್ದಕ್ಕಿದ್ದಂತೆ ಹತ್ತಿರದ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವು ತುಂಬಾ ಕೆಳಮಟ್ಟದಲ್ಲಿ ಹಾರುತ್ತಿತ್ತು ಮತ್ತು ನೇರವಾಗಿ ಐದು ಅಂತಸ್ತಿನ ಕಟ್ಟಡಗಳಿಗೆ ಡಿಕ್ಕಿ ಹೊಡೆದಿದೆ, ಇದರಿಂದಾಗಿ ಆ ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಅಪಘಾತವು ಹತ್ತಿರದ ಅನೇಕ ಕಟ್ಟಡಗಳಿಗೆ ತೀವ್ರ ಹಾನಿಯನ್ನುಂಟು ಮಾಡಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ವಿಮಾನದಲ್ಲಿದ್ದ 242 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
BREAKING : ಏರ್ ಇಂಡಿಯಾ ವಿಮಾನ ದುರಂತ ; ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ಸೇರಿ 242 ಮಂದಿ ಸಾವು
ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ – ಕುಷ್ಟಗಿ ದೈನಂದಿನ ಎಕ್ಸ್ಪ್ರೆಸ್ ರೈಲುಗಳ ವೇಳೆಯಲ್ಲಿ ಪರಿಷ್ಕರಣೆ