ಮಂಗಳೂರು: ಮಂಗಳೂರಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಮಾಡಿರುವ ಘಟನೆ ನಡೆದಿದೆ. ಕಡಬದ ಸರ್ಕಾರಿ ಕಾಲೇಜು ಬಳಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಾಗೊಂಡಿರುವ ವಿದ್ಯಾರ್ಥಿನಿಯರನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಕೂಡ ಪ್ರಾಣಾಪಾಯಿಂದ ಪಾರಾಗಿದ್ದು, ಮೂವರನ್ನು ಕೂಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗುವುದು ಎನ್ನಲಾಗಿದೆ. ಸದ್ಯ ಮೂವರಿಗೂ ಕೂಡ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಒಬ್ಬರ ಆರೋಗ್ಯ ಗಂಭಿರವಾಗಿದೆ ಎನ್ನಲಾಗಿದೆ.
BREAKING: ಲಂಚ ಪ್ರಕರಣಗಳಲ್ಲಿ ಸಂಸದರು, ಶಾಸಕರಿಗೆ ‘ವಿನಾಯಿತಿ’ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
ಪೇಮೆಂಟ್ಸ್ ಬ್ಯಾಂಕ್ ವಿವಾದ: ಫೆಬ್ರವರಿಯಲ್ಲಿ 11% ಕ್ಕೆ ಕುಸಿದ Paytm ನ ‘UPI’ ಮಾರುಕಟ್ಟೆ ಪಾಲು
ಮಂಕಿ ಕ್ಯಾಪ್, ಮಾಸ್ಕ್ ಹಾಕಿಕೊಂಡಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬರ ಈ ರೀತಿ ಮಾಡಿದ್ದಾನೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರೆಸಿದ್ದಾರೆ ಅಂತ ತಿಳಿದು ಬಂದಿದೆ. ಬಂಧಿತ ಆರೋಪಿಯನ್ನು ಅಭಿನ್ ಅಂತ ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.