ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರ್ಘಟನೆಯೊಂದು ನಡೆದಿದ್ದು, ಕಲುಷಿತ ನೀರು ಸೇರಿ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹದೇವಪುರ ಕ್ಷೇತ್ರದ ಸಾದರಮಂಗಲ ಕೆರೆಯಲ್ಲಿ ಕಲುಷಿತ ನೀರು ಸೇರಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಅಕ್ಕಪಕ್ಕದ ಫ್ಯಾಕ್ಟರಿ, ಅಪಾರ್ಟ್ಮೆಂಟ್ ಗಳಿಂದ ನೀರು ಕೆರೆಗೆ ಸೇರಿದ ಪರಿಣಾಮ ಮೀನುಗಳು ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ.
ಸದ್ಯ ಘಟನೆ ಬಗ್ಗೆ ಮಾಹಿತಿ ತಿಳಿದ ಸಿಬ್ಬಂದಿಗಳು ಸಾದರಮಂಗಲ ಕೆರೆಯಲ್ಲಿ ಸಾವನ್ನಪ್ಪಿರುವ ಮೀನುಗಳನ್ನು ಹೊರತೆಗೆಯುತ್ತಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.