ಬೆಂಗಳೂರು : ಒಂದೇ ಕಂಪನಿ ಹೆಸರಿನಲ್ಲಿ 20 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಘಟನೆ ನಡೆದಿದೆ.
SRGA ಸಂಸ್ಥೆ ಹೆಸರಿನಲ್ಲಿ ಫೇಕ್ ಗ್ರೂಪ್ ಕ್ರಿಯೇಟ್ ಮಾಡಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವಂಚನೆಗೊಳಗಾದ 20 ಕ್ಕೂ ಹೆಚ್ಚು ಜನರು ಯಶವಂತಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
20 ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆರಂಭದಲ್ಲಿ 2,500 ರೂ. ಪಡೆದು ನಿತ್ಯ 50 ರೂ. ಕೊಡುವುದಾಗಿ ಭರವಸೆ ನೀಡಲಾಗಿದೆ. ಮೂರು ತಿಂಗಳ ಕಾಲ ಈ ರೀತಿ ಹಣ ಕೊಡುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಹಣದ ಆಸೆಗೆ ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ. ಪ್ಲ್ಯಾನ್ ಗಳ ಆಧಾರದ ಮೇಲೆ ದೂರುದಾರರು ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.