ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ್ ಹತ್ಯೆ ಪ್ರಕರಣದ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಆರು ತಿಂಗಳ ಹಿಂದೆ ಗಿರೀಶ್ ಹುಬ್ಬಳ್ಳಿಯ ಯಲ್ಲಾಪುರ ಓಣಿಯಲ್ಲಿ ಅಪ್ರಾಪ್ತಳನ್ನು ಪ್ರೀತಿಸಿ ಮೋಸ ಮಾಡಿದ್ದ ಈ ಬಗ್ಗೆ ಬಾಲಕಿಯ ಪೋಷಕರು ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರೀಶ್ ವಿರುದ್ಧ ಸೆಕ್ಷನ್ 420, 504ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಶ್ವಮಾನವ ಎಕ್ಸ್ ಪ್ರೆಸ್ ರೈಲಿನಲ್ಲಿ ತಡರಾತ್ರಿ ಅಂಜಲಿ ಹಂತಕ ಗಿರೀಶ್ ಅಲಿಯಾಸ್ ವಿಶ್ವನನ್ನು ಪೊಲೀಸರು ಬಂಧಿಸಿದ್ದು, ಇದೀಗ ಮಹಿಳೆಯೊಬ್ಬರು ಗಿರೀಶ್ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.
ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಗದಗ ಮೂಲದ ಲಕ್ಷ್ಮಿ ಎಂಬುವ ಪತಿ ಮಹಾತೇಂಶ್ ಸವಟೂರು ಎಂಬುವರ ದೂರು ಆಧರಿಸಿ ಎಫ್ ಐಆರ್ ದಾಖಲಾಗಿದೆ. ಪತ್ನಿಜೊತೆಗೆ ಬರುವಾಗ ಅರಸೀಕೆರೆ ನಿಲ್ದಾಣದಲ್ಲಿ ಜನರಲ್ ಬೋಗಿ ಹತ್ತಿದ್ದ ಗಿರೀಶ್ ಕಿರಿಕ್ ಮಾಡಿದ್ದ. ರೈಲು ಹತ್ತಿ ಮಹಿಳೆಗೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಶೌಚಾಲಯಕ್ಕೆ ಹೋದಾಗ ಮಹಿಳೆಯನ್ನು ಹಿಂಬಾಲಿಸಿಕೊಂಡು ರೆಸ್ಟ್ ರೂಂ ಕಿಂಡಿಯಿಂದ ಗಮನಿಸುತ್ತಿದ್ದ. ದಬಾಯಿಸಿದಕ್ಕೆ ಚಾಕುವಿನಿಂದ ಇರಿಯಲು ಮುಂದಾಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.