ಆಸ್ಕರ್ ಅಂಗಳದಲ್ಲಿ ಈ ಬಾರಿ ಸ್ಪರ್ಧೆ ಅತ್ಯಂತ ಕಠಿಣವಾಗಿದೆ. 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಪ್ರಮುಖವಾಗಿ ಪೌಲ್ ಥಾಮಸ್ ಆಂಡರ್ಸನ್ ಅವರ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಮತ್ತು ರಯಾನ್ ಕೂಗ್ಲರ್ ನಿರ್ದೇಶನದ ‘ಸಿನರ್ಸ್’ ಚಿತ್ರಗಳ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ.
ಇತಿಹಾಸ ನಿರ್ಮಿಸಿದ ‘ಸಿನರ್ಸ್’: ರಯಾನ್ ಕೂಗ್ಲರ್ ಅವರ ‘ಸಿನರ್ಸ್’ ಸಿನಿಮಾ ಬರೋಬ್ಬರಿ 16 ನಾಮನಿರ್ದೇಶನಗಳನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಬಕ್ಲಿ ಗೆಲುವು ಸುಲಭ: ‘ಹ್ಯಾಮ್ನೆಟ್’ ಚಿತ್ರದ ಅದ್ಭುತ ನಟನೆಗಾಗಿ ಜೆಸ್ಸಿ ಬಕ್ಲಿ ಅವರು ‘ಶ್ರೇಷ್ಠ ನಟಿ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಆಂಡರ್ಸನ್ ಚಿತ್ರದ ಪ್ರಭಾವ: ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಒಟ್ಟು 13 ನಾಮನಿರ್ದೇಶನಗಳೊಂದಿಗೆ ರೇಸ್ನಲ್ಲಿದೆ.
ಆಸ್ಕರ್ 2026: ಇದುವರೆಗೆ ಘೋಷಣೆಯಾದ ವಿಜೇತರ ಪಟ್ಟಿ
ಪ್ರಶಸ್ತಿ ಪ್ರದಾನ ಸಮಾರಂಭವು ಮುಂದುವರಿಯುತ್ತಿದ್ದು, ಈವರೆಗೆ ಘೋಷಿಸಲಾದ ಪ್ರಮುಖ ವಿಜೇತರು ಇಲ್ಲಿದ್ದಾರೆ:








