ಕಾಶ್ಮೀರ : ದಕ್ಷಿಣ ಕಾಶ್ಮೀರದ ಟ್ರಾಲ್’ನಲ್ಲಿ ಶಂಕಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಸೈನಿಕನೊಬ್ಬ ಗಾಯಗೊಂಡಿದ್ದಾನೆ.
ಟ್ರಾಲ್’ನ ಖಾನಗುಂಡ್ ಗ್ರಾಮದ ನಿವಾಸಿ ಡೆಲೈರ್ ಮುಷ್ತಾಕ್ ಸೋಫಿ ಎಂದು ಗುರುತಿಸಲ್ಪಟ್ಟ ಸೈನಿಕ ರಜೆಯ ಮೇಲೆ ಮನೆಗೆ ಬಂದಾಗ ಕೆಲವು ಶಂಕಿತ ಉಗ್ರರು ಬುಧವಾರ ಸಂಜೆ ಅವರ ಮೇಲೆ ಗುಂಡು ಹಾರಿಸಿದರು. ಸೈನಿಕನ ಕಾಲಿಗೆ ಗುಂಡು ಬಿದ್ದಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂದ್ಹಾಗೆ, ಸೋಫಿ ಪ್ರಸ್ತುತ ಉತ್ತರ ಕಾಶ್ಮೀರದ ಪಟ್ಟಾನ್’ನಲ್ಲಿ ಸೇನಾಧಿಕಾರಿಯಾಗಿದ್ದಾರೆ.