ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೇನಾ ಪೋಸ್ಟ್ ಮೇಲೆ ಬುಧವಾರ ಮುಂಜಾನೆ ಭಯೋತ್ಪಾದಕರು ಎರಡು ಗ್ರೆನೇಡ್ಗಳನ್ನು ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಗ್ರೆನೇಡ್’ಗಳಲ್ಲಿ ಒಂದು ಮಾತ್ರ ಸ್ಫೋಟಗೊಂಡಿದೆ.
ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭಯೋತ್ಪಾದಕರನ್ನ ಪತ್ತೆಹಚ್ಚಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರನ್ಕೋಟೆ ಪ್ರದೇಶದ ಸೇನಾ ಶಿಬಿರದ ಹಿಂಭಾಗದ ಸೇನಾ ಪೋಸ್ಟ್ ಮೇಲೆ ಭಯೋತ್ಪಾದಕರು ಎರಡು ಗ್ರೆನೇಡ್ಗಳನ್ನ ಎಸೆದಿದ್ದಾರೆ. ಅವುಗಳಲ್ಲಿ ಒಂದು ಸ್ಫೋಟಗೊಂಡರೆ, ಇನ್ನೊಂದು ಸ್ಫೋಟಗೊಳ್ಳಲಿಲ್ಲ ಮತ್ತು ನಂತರ ಶೋಧ ಕಾರ್ಯಾಚರಣೆಯ ಸಮಯದಲ್ಲಿ ತಜ್ಞರು ಅದನ್ನು ನಿಷ್ಕ್ರಿಯಗೊಳಿಸಿದರು ಎಂದು ಅವರು ಹೇಳಿದರು.
BREAKING : ಬೆಂಗಳೂರಲ್ಲಿ 13 ಸಾವಿರ ಲಂಚ ಪಡೆಯುವಾಗ, ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಬಿಲ್ ಕಲೆಕ್ಟರ್!
BIG NEWS : ನನ್ನಂತೆಯೇ ಸಾಕಷ್ಟು ಜನ ‘ಸಿಎಂ’ ಆಕಾಂಕ್ಷಿಗಳಿದ್ದಾರೆ : ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ
ರೈತರೇ ಗಮನಿಸಿ : ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ `ಪಿಎಂ ಕಿಸಾನ್’ ಯೋಜನೆಯ 19 ನೇ ಕಂತಿನ ಹಣ.!