ಮಹದೇವಪುರ : ಭಯೋತ್ಪಾದನೆ, ಜನೋತ್ಪಾದನೆ ಇವರ ಕೆಲಸ ಎಂದು ಮುಸ್ಲಿಮರ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ರಾಮಗೊಂಡನಹಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸುತ್ತಿರುವ ಬಾಂಗ್ಲಾದೇಶದ ವಲಸಿಗರನ್ನು ಗುರುತಿಸಿ, ಮರಳಿ ಅವರ ದೇಶಕ್ಕೆ ಕಳುಹಿಸುವ ಕುರಿತಂತೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ 22 ಮಹಿಳೆಯರಿಗೆ 91 ಮಕ್ಕಳು ಹುಟ್ಟಿದ್ದಾರೆ. ಪುರುಸೊತ್ತು ಇಲ್ಲದೆ ಮಕ್ಕಳನ್ನು ಹುಟ್ಟಿಸುತ್ತಾರೆ. ಆದರೆ ಹಿಂದೂ ಮಹಿಳೆಯರು 1 ಮಗು ಹೇರ್ತಾರೆ. ಪಾಕಿಸ್ತಾನದಲ್ಲಿ ಕೇವಲ 5% ಹಿಂದೂಗಳಿದ್ದಾರೆ. ಐಫೆಲ್ ಟವರ್ ಕೆಳಗೆ ದನದ ಮಾಂಸ ಕಡಿದು ತಿಂತಾರೆ ಎಂದು ಹೇಳಿಕೆ ನೀಡಿದ್ದಾರೆ.