ಬೆಂಗಳೂರು: ನೇರಳೆ ಮಾರ್ಗದಲ್ಲಿ ತಾತ್ಕಾಲಿಕವಾಗಿ ಮೆಟ್ರೋ (Namma Metro) ಸಂಚಾರ ಸ್ಥಗಿತವಾಗಿದ್ದು, , ಪ್ರಯಾಣಿಕರು ಪರದಾಟ ನಡೆಸಿದ ಸನ್ನಿವೇಶ ಕಂಡು ಬಂದಿದೆ.
ಮೆಟ್ರೋ ಪವರ್ ಡಿಸ್ಟ್ರಿಬ್ಯೂಷನ್ ನಲ್ಲಿ ಸಮಸ್ಯೆಯಾಗಿದೆ. ಅದನ್ನ ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದು, ಸದ್ಯ ಈ ಸಮಸ್ಯೆ, ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಗೆ ಹರಿಯಲಿದೆ ಎನ್ನಲಾಗಿದೆ. ಎಂಜಿ ರೋಡ್ ನಿಂದ (MG Road) ಬೈಯಪ್ಪನಹಳ್ಳಿ (Baiyappanahalli) ಮಾರ್ಗ ಸಂಚಾರ ಬಂದ್ ಆಗಿದ್ದು, ಮೊದಲು ತಾಂತ್ರಿಕ ಸಮಸ್ಯೆ ಹಿನ್ನೆಲೆ ಎಂದು ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸಿದೆ.
Metro train services between Baiyappanahalli to MG Road which was stopped at 9.15 Hrs due to a Technical sang is now restored from 11.00 Hrs . Services in full from Whitefield to Challaghatta is now available. Inconvenience caused is regretted.
— ನಮ್ಮ ಮೆಟ್ರೋ (@cpronammametro) January 27, 2024