ನವದೆಹಲಿ : ಸುಲಿಗೆ ಮತ್ತು ಜೂಜಾಟದಂತಹ ಅಪರಾಧ ಚಟುವಟಿಕೆಗಳ ಕಳವಳಗಳ ಬಗ್ಗೆ ಸರ್ಕಾರ ಟೆಲಿಗ್ರಾಮ್ ಕುರಿತು ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಫಲಿತಾಂಶಗಳನ್ನ ಅವಲಂಬಿಸಿ ಮೆಸೇಜಿಂಗ್ ಅಪ್ಲಿಕೇಶನ್ ಸಹ ನಿಷೇಧಿಸಬಹುದು ಎಂದು ವರದಿಯಾಗಿದೆ.
ಟೆಲಿಗ್ರಾಮ್’ನ 39 ವರ್ಷದ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾವೆಲ್ ಡುರೊವ್ ಅವರನ್ನು ಆಗಸ್ಟ್ 24ರಂದು ಪ್ಯಾರಿಸ್ನಲ್ಲಿ ಆ್ಯಪ್ನ ಮಿತಗೊಳಿಸುವ ನೀತಿಗಳಿಗಾಗಿ ಬಂಧಿಸಿದ ನಂತರ ಈ ಮಾಹಿತಿ ಬಹಿರಂಗವಾಗಿದೆ. ಅಪ್ಲಿಕೇಶನ್ನಲ್ಲಿ ಅಪರಾಧ ಚಟುವಟಿಕೆಗಳನ್ನ ತಡೆಗಟ್ಟಲು ವಿಫಲವಾದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
“ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) (MHAಅಡಿಯಲ್ಲಿ) ಮತ್ತು MeitY ಟೆಲಿಗ್ರಾಮ್’ನಲ್ಲಿ P2P ಸಂವಹನಗಳನ್ನ ಪರಿಶೀಲಿಸುತ್ತಿವೆ” ಎಂದು ವರದಿಯಾಗಿದೆ.
ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಡೆಸುತ್ತಿರುವ ತನಿಖೆಯು ಸುಲಿಗೆ ಮತ್ತು ಜೂಜಾಟದಂತಹ ಅಪರಾಧ ಚಟುವಟಿಕೆಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
BREAKING : ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ವಿಚಾರ : ನಟ ದರ್ಶನ್ ವಿರುದ್ಧ ಮತ್ತೆ 3 `FIR’ ದಾಖಲು!
Job Alert : ಭಾರತೀಯ ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | RRB Recruitment 2024