ನವದೆಹಲಿ : ಬೆರಿಲ್ ಚಂಡಮಾರುತದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಬಾರ್ಬಾಡೋಸ್ ನಲ್ಲಿ ಸಿಲುಕಿಕೊಂಡಿದ್ದ ಟೀಂ ಇಂಡಿಯಾ ಆಟಗಾರರು ಇಂದು ಭಾರತಕ್ಕೆ ಆಗಮಿಸಿದ್ದಾರೆ.
ಬೆರಿಲ್ ಚಂಡಮಾರುತದಿಂದಾಗಿ ಕಳೆದ ಮೂರು ದಿನಗಳಿಂದ ದ್ವೀಪದಲ್ಲಿ ಸಿಲುಕಿರುವ ಭಾರತೀಯ ತಂಡ, ಅದರ ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬಗಳು, ಮಂಡಳಿಯ ಅಧಿಕಾರಿಗಳು ಮತ್ತು ಭಾರತೀಯ ಮಾಧ್ಯಮಗಳನ್ನು AIC24WC – ಏರ್ ಇಂಡಿಯಾ ಚಾಂಪಿಯನ್ಸ್ 24 ವಿಶ್ವಕಪ್ ಎಂದು ಹೆಸರಿಸಲಾದ ಏರ್ ಇಂಡಿಯಾ ವಿಶೇಷ ಚಾರ್ಟರ್ ವಿಮಾನವು ದೆಹಲಿಗೆ ಬಂದಿಳಿದಿದೆ.
Men's Indian Cricket Team lands at Delhi airport after winning the #T20WorldCup2024 trophy. pic.twitter.com/y2fgArfugh
— ANI (@ANI) July 4, 2024
#WATCH | Delhi: Supporters gather at the airport to welcome Men's Indian Cricket Team.
Team India will arrive at Delhi Airport after winning the #T20WorldCup2024 trophy. pic.twitter.com/yQ4iEw4p0c
— ANI (@ANI) July 4, 2024
ವಿಶ್ವಕಪ್ ಟ್ರೋಫಿಯನ್ನ ಮನೆಗೆ ತರುತ್ತಿರುವ ತಂಡವು ಇಂದು ಮುಂಜಾನೆ ಬಾರ್ಬಡೋಸ್ನಿಂದ ದೆಹಲಿಗೆ ಆಗಮಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಭಾರತ ಕ್ರಿಕೆಟ್ ತಂಡವನ್ನ ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.