ಚೆನ್ನೈ : ತಮಿಳು ಖ್ಯಾತ ನಟ ವಿಶಾಲ್ ಹಠಾತ್ತನೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಟ ವಿಶಾಲ್ ಅವರು ಮಾಜಿ ಸಚಿವ ಕೆ. ಪೊನ್ಮುಡಿ ಅವರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರು. ಆದರೆ ಕಾರ್ಯಕ್ರಮದಲ್ಲೇ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ತುರ್ತು ಚಿಕಿತ್ಸೆ ನೀಡಲಾಯಿತು. ಅವರ ಸ್ಥಿತಿ ಸ್ಥಿರವಾಗಿದೆ, ಆದರೂ ಇನ್ನೂ ಯಾವುದೇ ಅಧಿಕೃತ ವೈದ್ಯಕೀಯ ಹೇಳಿಕೆ ಬಿಡುಗಡೆಯಾಗಿಲ್ಲ.
ವಿಶಾಲ್ ಅವರ ವ್ಯವಸ್ಥಾಪಕ ಹರಿಕೃಷ್ಣನ್ ಮಾತನಾಡಿ, ನಟ ವಿಶಾಲ್ ಊಟ ಮಾಡದ ಕಾರಣ ಈ ಘಟನೆ ಸಂಭವಿಸಿರಬಹುದು ಎಂದು ಹೇಳಿದ್ದಾರೆ. ಜನವರಿ 2025 ರಲ್ಲಿ ನಟ ಡೆಂಗ್ಯೂನಿಂದ ಚೇತರಿಸಿಕೊಂಡಿದ್ದರು.