ನವದೆಹಲಿ : ಸ್ವಿಟ್ಜರ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಗುರುವಾರ (ಜೂನ್ 27) ಮುಂಜಾನೆ ಭೂಕಂಪನ ಸಂಭವಿಸಿದೆ. ಸುದ್ದಿಯ ಪ್ರಕಾರ, ತೀವ್ರತೆಯು 4.2 ರಷ್ಟಿತ್ತು. ಲೌಫೆನ್ಬರ್ಗ್ ಇದರ ಕೇಂದ್ರವಾಗಿದೆ.
ಮಣಿಪುರ ಮತ್ತು ಅಸ್ಸಾಂನಲ್ಲಿ ಬುಧವಾರ ಭೂಕಂಪನದ ಅನುಭವವಾಗಿದೆ. ಮಣಿಪುರದಲ್ಲಿ ರಿಕ್ಟರ್ ಮಾಪಕದಲ್ಲಿ 4.5 ಮತ್ತು ಅಸ್ಸಾಂನಲ್ಲಿ 3.2 ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ.
ಭೂಕಂಪನದ ಅನುಭವವಾದ ಕೂಡಲೇ ಜನರು ಮನೆಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳನ್ನು ತಲುಪಿದರು. ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ 9:54 ಕ್ಕೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 3.2ರಷ್ಟಿತ್ತು. ಮಣಿಪುರ ಮತ್ತು ಅಸ್ಸಾಂನ ವಿಪತ್ತು ನಿರ್ವಹಣಾ ಅಧಿಕಾರಿಗಳ ಪ್ರಕಾರ, ಯಾವುದೇ ಸಾವುನೋವು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿಗಳಿಲ್ಲ.