ಬೆಂಗಳೂರು : ಆಗಸ್ಟ್ 5 ರಿಂದ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸ್ತಬ್ದವಾದರೆ ಖಾಸಗಿ ವಾಹನ ಬಳಕೆ ಸಿದ್ಧತೆ ನಡೆಸಲಾಗಿದೆ.
ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ ಡಿ.ಸಿ. ಪಿ.ಎನ್ ರವೀಂದ್ರ ಅವರು ಮಾತನಾಡಿ, ಆಗಸ್ಟ್ 5 ರಿಂದ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸ್ತಬ್ದವಾದರೆ ಖಾಸಗಿ ವಾಹನ ಬಳಕೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್, ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಆಟೋ ಮೂಲಕ ಸೇವೆ ನೀಡಲಾಗುವುದು. ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾದರೆ ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಶಾಲಾ ವಾಹನಗಳನ್ನು ಸಾರಿಗೆ ಸೇವೆಗೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 120 ಖಾಸಗಿ ಬಸ್, 80 ಒಪ್ಪಂದದ ಬಸ್, 219 ಮ್ಯಾಕ್ಸಿಕ್ಯಾಬ್, 581 ಶಾಲಾ ಬಸ್, 51 ಖಾಸಗಿ ಸೇವಾ ವಾಹನಗಳ ಮೂಲಕ ಸೇವೆ ಒದಗಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಖಾಸಗಿ ವಾಹನಗಳಲ್ಲಿ ಮಹಿಳೆಯರು ಹಣ ಪಾವತಿಸಿ ಪ್ರಯಾಣಿಸಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕು ಎಂದು ಹೇಳಿದ್ದಾರೆ.