ಬೆಂಗಳೂರು: ರಾಮೇಶ್ವೇರ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಘಟನೆ ಸಂಬಂಧ ತನಿಖಾಧೀಕಾರಿಯಾಗಿ ಎಸ್‌ಐ ನವೀನ್ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. ಘಟನೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
ರಾಜ್ಯದ ‘ವಸತಿ ರಹಿತ’ ಬಡ ಕುಟುಂಬಗಳಿಗೆ ಗುಡ್‌ನ್ಯೂಸ್: 36,789 ಮನೆಗಳ ಹಂಚಿಕೆಗೆ ಸಿಎಂ ಇಂದು ಚಾಲನೆ!
ಮಹಾ ಶಿವರಾತ್ರಿ 2024: ದಿನಾಂಕ, ಇತಿಹಾಸ, ಮಹತ್ವ, ಪೂಜಾ ಸಮಯ, ಇತರ ಮಹತ್ವದ ಮಾಹಿತಿ ಇಲ್ಲಿದೆ!
EPFO ಚಂದಾದರಿಗೆ ಗುಡ್‌ನ್ಯೂಸ್: ಈ ಯೋಜನೆಯಲ್ಲಿ ಸಿಗಲಿದೆ ನಿಮಗೆ 7 ಲಕ್ಷ ವಿಮೆ ಹಣ!
ಇನ್ನೂ ವಿಪಗಳು ಘಟನೆಯನ್ನು ಎನ್‌ಐಎಗೆ ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ರಾಜ್ಯ ಸರ್ಕಾರ ಈಗ ಇದನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಇನ್ನೂ ಸ್ಫೋಟವಾಗಿರುವುದು ನಿಜ. ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ , ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಂದು ನಾನೂ ಕೂಡ ಸ್ಥಳಕ್ಕೆ ತೆರಳಲಿದ್ದೇನೆ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.