ಬೆಂಗಳೂರು : 2024-25 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ/ತತ್ಸಮಾನ ವೃಂದದ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು/ ತತ್ಸಮಾನ ವೃಂದ, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಶಿಕ್ಷಕರುಗಳ ವಿಭಾಗ ಮಟ್ಟದ ಸಾಮಾನ್ಯ ವರ್ಗಾವಣೆಗಳನ್ನು ಹಮ್ಮಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಗಳಿಗೆ ಸಂಬಂಧಿಸಿದಂತೆ, 2024-25 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮುಖ್ಯೋಪಾಧ್ಯಾಯರ ಮತ್ತು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ/ತತ್ಸಮಾನ ವೃಂದದ ಶಿಕ್ಷಕರ ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ/ತತ್ಸಮಾನ ವೃಂದದ ಅಧಿಕಾರಿಗಳ ವಿಭಾಗ ಮಟ್ಟದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ವಿಭಾಗೀಯ ಹಂತದಲ್ಲಿ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಹಮ್ಮಿಕೊಳ್ಳುವಂತೆ ಉಲ್ಲೇಖಗಳನ್ವಯ ಆದೇಶಿಸಲಾಗಿ, ದಿನಾಂಕ : 17.11.2025 ರಿಂದ ದಿನಾಂಕ : 26.11.2025 ರವರೆಗೆ ವೇಳಾಪಟ್ಟಿಯಂತೆ ಸದರಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಶಿಕ್ಷಕರ ಹಿತದೃಷ್ಟಿಯಿಂದ ರೌಂಡ್ ರಾಬಿನ್ (Round Robin) ಮಾದರಿಯಲ್ಲಿ ಜರುಗಿಸಲು ನಿಶ್ಚಯಿಸಲಾಗಿರುತ್ತದೆ. ಪ್ರಯುಕ್ತ ವಿಭಾಗದ ಎಲ್ಲಾ ಉಪನಿರ್ದೇಶಕರು ಪೂರ್ವಭಾವಿಯಾಗಿ ಈ ಕೆಳಕಂಡ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಿದೆ.
ವಿಭಾಗೀಯ ಕಛೇರಿಯಿಂದ ನೀಡಿರುವ ವರ್ಗಾವಣಾ ವೇಳಾಪಟ್ಟಿಯಂತೆ ಸಂಬಂಧಿಸಿದ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು(ಆ) ರವರ ಕಛೇರಿಯಿಂದಲೇ ರೌಂಡ್ ರಾಬಿನ್ ಕೌನ್ಸಿಲಿಂಗ್ ಗೆ ಹಾಜರಾಗಲು ಸೂಚಿಸುವುದು. ಈ ಸಂಬಂಧ ವಿಭಾಗೀಯ ಹಂತದ ವರ್ಗಾವಣಾ ಅಂತಿಮ ಆದ್ಯತಾ ಪಟ್ಟಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದು.
ದೈನಂದಿನ ವೃತ್ತ ಪತ್ರಿಕೆಗಳಲ್ಲಿ ಮತ್ತು ಶಿಕ್ಷಕರ ಸಂಘಟಣೆಯವರಿಗೆ ಸದರಿ ಕೌನ್ಸಿಲಿಂಗ್ ಪ್ರಕ್ರಿಯೆ ಬಗ್ಗೆ ವ್ಯಾಪಕ ಪ್ರಚಾರ ನೀಡುವ ಬಗ್ಗೆ ಅಗತ್ಯ ಕ್ರಮ ವಹಿಸುವುದು.
ಸದರಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಛೇರಿಯಿಂದ ಜರುಗಿಸಲಾಗುತ್ತಿದ್ದು, ಶಿಕ್ಷಕರ ಗುರುತಿನ ಚೀಟಿ ಮತ್ತು ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ವರ್ಗಾವಣೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವುದು.
.. ಜಿಲ್ಲಾ ಹಂತದಲ್ಲಿ ಕೌನ್ಸಿಲಿಂಗ್ ನಿರ್ವಹಣೆ ಮಾಡಲು ನೋಡಲ್ ಅಧಿಕಾರಿಗಳನ್ನು/ ತಾಂತ್ರಿಕ ಸಿಬ್ಬಂದಿಗಳನ್ನು ಸೂಕ್ತ ಕಂಪ್ಯೂಟರ್, ಇಂಟರನೆಟ್ ಮತ್ತು ಯುಪಿಎಸ್ (ಬ್ಯಾಟರಿ ಬ್ಯಾಕಪ್) ಸಿದ್ಧತೆಗಳೊಂದಿಗೆ ದಿನಾಂಕ : 15.11.2025 ರಂದು ತಯಾರಿರುವುದು ಮತ್ತು ಉಪನಿರ್ದೇಶಕರು ಖುದ್ದಾಗಿ ಎಲ್ಲ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸುವುದು.
ಶಿಕ್ಷಕರ ಸ್ಥಳ ಆಯ್ಕೆ ಪ್ರಕ್ರಿಯೆಯನ್ನು ರೌಂಡ್ ರಾಬಿನ್ (Round Robin) ಮಾದರಿಯಲ್ಲಿ ನಡೆಸುತ್ತಿರುವುದರಿಂದ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ಸೂಕ್ತ ಕ್ರಮ ವಹಿಸುವುದು.









