ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 131 ಇನ್ಪೆಕ್ಟರ್ ಹಾಗೂ 27 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಬರೋಬ್ಬರಿ 131 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಡೈರಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರ್ ಆಫ್ ಪೊಲೀಸ್ ಅವರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಎಸ್ ಎಲ್ ಸಾಗರ್ ಅವರನ್ನು ಚಾಮರಾಜನಗರದ ಸಂತೇಮಾರನಹಳ್ಳಿ ವೃತ್ತಕ್ಕೆ ವರ್ಗಾವಣೆ ಮಾಡಿದ್ದರೇ, ಬಸವರಾಜು ಅವರನ್ನು ಡಿಸಿಆರ್ ಇಗೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗದ ಸೊರಬ ವೃತ್ತದ ಪೊಲೀಸ್ ಇನ್ಸ್ ಪೆಕ್ಟರ್ ರಾಜಶೇಖರಯ್ಯ ಎಲ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮುದ್ದುರಾಜ ವೈ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ಬೆಂಗಳೂರು ನಗರ ಸಂಚಾರ ಮತ್ತು ಯೋಜನೆಯ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥನಾರಾಯಣ ಸ್ವಾಮಿ ಬಿಎನ್ ಅವರನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಸವದತ್ತಿ ಪೊಲೀಸ್ ಠಾಣೆಯ ಧರ್ಮಾಕರ್ ಎಸ್ ಧರ್ಮಟ್ಟಿ ಅವರನ್ನು ಬೆಳಗಾವಿಯ ಕಂಗ್ರಾಳಿ ಕೆ ಎಸ್ ಆರ್ ಪಿ ಪೊಲೀಸ್ ತರಬೇತಿ ಶಾಲೆಗೆ, ಶಿವಮೊಗ್ಗದ ಡಿಎಸ್ ಬಿ ಅಣ್ಣಯ್ಯ ಕೆ.ಟಿ ಅವರನ್ನು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ, ಚಿತ್ರದುರ್ಗದ ಹೊಳಲ್ಕೆರೆ ವೃತ್ತದ ಮಾರ್ತಾಂಡಪ್ಪ ಬಿ ಚಿಕ್ಕಣ್ಣನವರ್ ಅನ್ನು ಹಾವೇರಿಯ ಬ್ಯಾಡಗಿ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 131 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಪಟ್ಟಿ
27 ಡಿವೈಎಸ್ಪಿಗಳನ್ನು ವರ್ಗಾವಣೆ