ಬೆಂಗಳೂರು : 2025 ನೇ ಸಾಲಿನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕಾರ್ಯದ ವಿವಿಧ ಸಂಭಾವನೆಗಳ ಪರಿಷ್ಕರಣೆ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸದೆ.
2025 ನೇ ಸಾಲಿನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ವಿವಿಧ ಕಾರ್ಯಗಳಾದ ಪರೀಕ್ಷಾ ಕೇಂದ್ರದ ಸಾದಿಲ್ನಾರು, ಮೌಲ್ಯಮಾಪನ ಕಾರ್ಯಕ್ಕೆ ಭಾಗವಹಿಸುವ ಅಧಿಕಾರಿ/ಸಿಬ್ಬಂದಿಗಳ ಸಂಭಾವನೆ ಮತ್ತು ಎಸ್.ಎಸ್.ಎಲ್.ಸಿ (ಜೆ.ಟಿ.ಎಸ್) ಪರೀಕ್ಷೆಯ ಸಂಭಾವನೆಯನ್ನು ಉಲ್ಲೇಖ (1) ರ ಸರ್ಕಾರಿ ಆದೇಶದಲ್ಲಿನ ಅವಕಾಶದ ಮೇರೆಗೆ ಮೂಲ ದರಗಳ ಮೇಲೆ ಶೇ. 5 ರಷ್ಟು ಪರಿಷ್ಕರಿಸಿ, ಈ ಕೆಳಕಂಡಂತೆ ಆದೇಶಿಸಿದೆ.