ಬೆಂಗಳೂರು : ಸರ್ಕಾರಿ ಕರಾರು/ಟೆಂಡರ್‌ಗಳಲ್ಲಿ ‘Arbitration Clause’ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
ವಿಷಯದನ್ವಯ ಉಲ್ಲೇಖಿತ ಸರ್ಕಾರದ ಸುತ್ತೋಲೆಯಲ್ಲಿ “Arbitration” ನಿಯಮವನ್ನು ಸರ್ಕಾರಿ ಕರಾರು/ಟೆಂಡರ್‌ಗಳಲ್ಲಿ ಅಳವಡಿಸಬೇಕಾದ ಕುರಿತು ಹೊರಡಿಸಲಾಗಿದ್ದ ಸುತ್ತೋಲೆ ಸಂಖ್ಯೆ:LAW 273 LAC 2012(p), ದಿನಾಂಕ: 10.01.2014, ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿರುತ್ತದೆ. ಅದರಂತೆ ಮುಂದಿನ ಕ್ರಮಕ್ಕಾಗಿ ಉಲ್ಲೇಖಿತ ಸುತ್ತೋಲೆ ಪ್ರತಿಯನ್ನು ಲಗತ್ತಿಸಿದೆ. ಸಂಬಂಧಿತ ಎಲ್ಲಾ ಪ್ರಾಧಿಕಾರಿಯವರು ಸರ್ಕಾರದ ಸುತ್ತೋಲೆಯನುಸಾರವಾಗಿ ಕ್ರಮ ಕೈಗೊಳ್ಳಲು ತಿಳಿಸಿದೆ.