ಬೆಂಗಳೂರು : 2024-25ನೇ ಸಾಲಿನ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳ ರಚನೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ವಿಧಾನಮಂಡಲದ/ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ಈ ಕೆಳಕಂಡ ಸದಸ್ಯರುಗಳು ನಾಮನಿರ್ದೇಶನ ಹೊಂದಿರುತ್ತಾರೆಂದು ಈ ಮೂಲಕ ಮಾನ್ಯ ಸದಸ್ಯರುಗಳಿಗೆ ತಿಳಿಯಪಡಿಸಲಾಗಿದೆ.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ 211(2)ರ ಮೇರೆಗೆ, ಮಾನ್ಯ ಸಭಾಧ್ಯಕ್ಷರು ಸಿ.ಸಿ. ಪಾಟೀಲ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ.