ಬೆಳಗಾವಿ : ಬೆಳಗಾವಿ ಸೆಂಟರ್ ನ ಎಸ್ ಎಸ್ ಎಲ್ ಸಿ ಯ ಸಮಾಜ ವಿಜ್ಞಾನ ಪತ್ರಿಕೆ ಸೋರಿಕೆಯಾಗಿದೆ.
ಹೌದು, ಇಂದು ರಾಜ್ಯಾದ್ಯಂತ ನಡೆಯುತ್ತಿರುವ ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆಯ ಸಮಾಜ ವಿಜ್ಞಾನ ಪತ್ರಿಕೆಯನ್ನು ಲೀಕ್ ಮಾಡಲಾಗಿದೆ.
ಬೆಳಗಾವಿಯಲ್ಲಿ ಎಸ್ ಎಸ್ ಎಲ್ ಸಿ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಬೆಳಗಾವಿಯ ಸೆಂಟರ್ ನ ಪ್ರಶ್ನೆ ಪತ್ರಿಕೆ ಇದೀಗ ಲೀಕ್ ಆಗಿದೆ. ಕಿಡಿಗಿಡಿಗಳು ಶಿಕ್ಷಣ ಇಲಾಖೆಗೆ ಚಾಲೆಂಜ್ ಹಾಕಿ ಬೆದರಿಕೆ ಹಾಕಿ ಇಂದು ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ.
2026ರ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ-1 ಇನ್ಸ್ಟಾಗ್ರಾಮ್ ನಲ್ಲಿ ಆಗಿದೆ ಪ್ರತಿ ವರ್ಷವೂ ಡೆಲ್ಟಾ ಇನ್ಸ್ಟಾ ಖಾತೆ ಆಕ್ಟಿವ್ ಆಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದಾಗಿ ಶಿಕ್ಷಣ ಇಲಾಖೆಗೆ ಬೆದರಿಕೆ ಹಾಕಿದ್ದಾರೆ. ಇಲಾಖೆಗೆ ಚಾಲೆಂಜ್ ಮಾಡಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದಾರೆ ಈ ಕುರಿತು ದೂರು ನೀಡಿದರು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಗಾಗಿ ಇದೀಗ ಪ್ರಶ್ನೆ ಪತ್ರಿಕೆ ಮತ್ತೆ ಲೀಕ್ ಮಾಡಿದ್ದಾರೆ. ಕಳೆದ ವರ್ಷವೂ ಡೆಲ್ಟಾ ಎಸ್ ಎಸ್ ಎಲ್ ಸಿ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪ್ರಶ್ನೆ ಪತ್ರಿಕೆ ಲೀಕಾಗಿತ್ತು.








