ನವದೆಹಲಿ : ಇಂದು ಸಂಜೆಯಿಂದ್ಲು ಸಂಗೀತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸ್ಪಾಟಿಫೈ ವ್ಯಾಪಕ ಸ್ಥಗಿತವನ್ನ ಎದುರಿಸುತ್ತಿದ್ದು, ಹಲವಾರು ದೇಶಗಳಲ್ಲಿ ಸಾವಿರಾರು ಬಳಕೆದಾರರು ಪ್ಲಾಟ್‌ಫಾರ್ಮ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಔಟೇಜ್-ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, ಭಾರತ, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಕೆನಡಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅಡಚಣೆಯ ವರದಿಗಳು ಹೆಚ್ಚಾದವು.
ಇನ್ನು ಭಾರತದಲ್ಲಿ ಮಾತ್ರ, ಡಿಸೆಂಬರ್ 15ರಂದು ರಾತ್ರಿ 8:04 ರ ಸುಮಾರಿಗೆ ದೂರುಗಳು ಗರಿಷ್ಠ ಮಟ್ಟವನ್ನು ತಲುಪಿದವು, 1,100 ಕ್ಕೂ ಹೆಚ್ಚು ಬಳಕೆದಾರರು ಅಪ್ಲಿಕೇಶನ್ ಕ್ರ್ಯಾಶ್‌ಗಳಿಂದ ಹಿಡಿದು ಪ್ಲೇಬ್ಯಾಕ್ ವೈಫಲ್ಯಗಳವರೆಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಸ್ಪಾಟಿಫೈ ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಅಡಚಣೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಟಿರಾದಿಂದ ಬೆಂಗಳೂರಿಗರಿಗೆ ಕ್ರಿಸ್ ಮಸ್ ಸಂಭ್ರಮದ ಆಫರ್; ‘ನೆಕ್ಸಸ್ ಮಾಲ್’ಗೆ ಭೇಟಿ ನೀಡಿ








