ಬೀದರ್: ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರಿಗೆ ಅಂಡರ್ ವರ್ಲ್ಡ್ ನಿಂದ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ, ಅಂಡರ್ ವರ್ಲ್ಡ್ ನಿಂದ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಅಂಡರ್ ವರ್ಲ್ಡ್ ಸೇರಿ ಕೆಲವು ಕಡೆಗಳಿಂದ ಕರೆಗಳು ಬಂದಿವೆ. ಈ ಹಿಂದೆಯೂ ಕೆಲವು ಬಾರಿ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ನನಗಾಗಿ ಮಂಗಳೂರಿನಲ್ಲಿ ಎನ್ಐಎ ಸ್ಥಾಪಿಸುವುದು ಬೇಡ. ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ ಎಂದರು.
ಎಲ್ಲಿ ಹುಟ್ಟಬೇಕು, ಎಲ್ಲಿ ಸಾಯಬೇಕು ಎಂಬುದನ್ನು ಆ ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ಮಾಡಿಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರು ಇಟ್ಟಂತೆ ಇರಲಿ, ನಮ್ಮ ಕೈಯಲ್ಲಿ ಏನೂ ಇಲ್ಲ ಈಗ ಮಾತನಾಡುತ್ತಿದ್ದೇನೆ. ಮರಳಿ ಮತ್ತೆ ಹೋಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ಎಂದು ಹೇಳಿದ್ದಾರೆ.