ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಎಸ್ ಐಟಿ ವಶದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣರನ್ನು ಎಸ್ ಐಟಿ ಅಧಿಕಾರಿಗಳು ಇಂದು ಸ್ಥಳ ಮಹಜರಿಗಾಗಿ ಹಾನಸ, ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಇಂದು ಬೆಳಗಿನ ಜಾವ ಪ್ರಜ್ವಲ್ ರೇವಣ್ಣರನ್ನು ಹಾಸನ ಹಾಗೂ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಹಾಸನ, ಹೊಳೆನರಸೀಪುರದ ತೋಟದ ಮನೆಗಳಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಬಳಿಕ ಸಂಸದರ ಕಚೇರಿ ಸೇರಿದಂತೆ ಇತರೆಡೆ ಸ್ಥಳ ಮಹಜರು ನಡೆಯುವ ಸಾಧ್ಯತೆ ಇದೆ.