ದಕ್ಷಿಣ ಕನ್ನಡ : ಧರ್ಮಸ್ಥಳ ಕೇಸ್ ನ ವಿಚಾರಣೆಗೆ ವಿಶೇಷ ತಂಡವನ್ನು ಎಸ್ ಐಟಿ ಅಧಿಕಾರಿಗಳು ರಚನೆ ಮಾಡಿದ್ದು, ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡಿದವರಿಗೆ ಎಸ್ ಐಟಿ ಠಾಣೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಹೌದು, ಧರ್ಮಸ್ಥಳ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡಿದವರು, ವಿಡಿಯೋ ಹರಿಬಿಟ್ಟವರಿಗೆ ಎಸ್ ಐಟಿ ಠಾಣೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವರ ಬಗ್ಗೆ ಎಸ್ ಐಟಿ ಪಟ್ಟಿ ಮಾಡಿದೆ.
ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಮಾತನಾಡಿರುವ ಕುರಿತಂತೆ ಕಳೆದ ಒಂದೂವರೆ ತಿಂಗಳ ಎಲ್ಲಾ ವಿಡಿಯೋಗಳನ್ನು ಎಸ್ ಐಟಿ ಸಂಗ್ರಹಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಎಸ್ ಐಟಿ ಕಂಪ್ಲೀಟ್ ಮಾನಿಟರ್ ಮಾಡಿದೆ ಎನ್ನಲಾಗಿದೆ.