ಬೆಳಗಾವಿ : ಶಿವಸೇನೆ ಪುಂಡರು ಮತ್ತೆ ಉದ್ದಟತನ ಮೆರೆದಿದ್ದು, ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರನ್ನು ತಡೆದು ಕಿರಿಕ್ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.
ಹೌದು, ಗಡಿ ವಿಚಾರವಾಗಿ ಮಹಾರಾಷ್ಟ್ರದ ಶಿವಸೇನೆ ಪುಂಡರು ಮತ್ತೆ ಉದ್ಧಟತನ ಪ್ರದರ್ಶಿಸಿದ್ದಾರೆ. ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಹೋಗಿದ್ದ ಶಾಸಕ ಪ್ರಭು ಚವ್ಹಾಣ್ಗೆ ಅಡ್ಡಿಪಡಿಸಿ ಕಿರಿಕ್ ಮಾಡಿದ್ದಾರೆ.
ಶಿವಸೇನೆ ಮುಖಂಡ ವಿಜಯ್ ದೇವಣೆ ನೇತೃತ್ವದಲ್ಲಿ ಅಡ್ಡಿಪಡಿಸಿದ್ದು, ಅಧಿವೇಶನ ವೇಳೆ ಮಹಾಮೇಳಕ್ಕೆ ಅವಕಾಶ ಕೊಟ್ಟಿಲ್ಲವೆಂದು ಕಿರಿಕ್ ತೆಗೆದಿದ್ದಾರೆ. ಈ ವೇಳೆ ಪ್ರಭು ಚವ್ಹಾಣ್ ಕರ್ನಾಟಕದಲ್ಲಿ ಎಂಇಎಸ್ ಪ್ರತಿಭಟನೆ ಬ್ಯಾನ್ ಮಾಡಿದ್ದಾರೆ ಕನ್ನಡದಲ್ಲಿ ಉತ್ತರ ಕೊಟ್ಟಿದ್ದಾರೆ.