ಬೆಂಗಳೂರು : ಹಿರಿಯ ಪತ್ರಕರ್ತ ಎನ್.ಸಿ.ಗುಂಡೂರಾವ್ (78) ಅವರು ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಫ್ರೂವ್ ರೀಡರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಗುಂಡೂರಾವ್ ಅವರು ನಂತರ ಪತ್ರಿಕೆಯ ಸಹಸಂಪಾದಕರಾಗಿ ನಿವೃತ್ತರಾಗಿದ್ದರು ಎನ್ನುವುದು ಅವರಲ್ಲಿನ ವೃತ್ತಿಪರತೆ – ಬದ್ಧತೆಗೆ ನಿದರ್ಶನ.
ಈ ಪತ್ರಿಕೆಯಲ್ಲಿ ಹೆಚ್ಚು ಕಡಿಮೆ ನಾಲ್ಕು ದಶಕಗಳ ಕಾಲ ವೃತ್ತಿನಿರತರಾಗಿದ್ದ ಗುಂಡೂರಾವ್ ಅವರ ರಾಜಕೀಯ ವರದಿಗಾರಿಕೆ ಮತ್ತು ಅಂಕಣ ಬರಹಗಳು ಆ ಕಾಲದಲ್ಲಿ ನನ್ನಂತಹವರಿಗೆ ಮಾರ್ಗದರ್ಶನ ನೀಡುತ್ತಿತ್ತು. ಸರಳ ಮತ್ತು ಸಜ್ಜನರಾಗಿದ್ದ ಗುಂಡೂರಾವ್ ಅವರು ವೃತ್ತಿಧರ್ಮವನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಮಾಧ್ಯಮರಂಗದ ಇಂದಿನ ಪೀಳಿಗೆಗೆ ಇವರ ಬದುಕು ಮತ್ತು ಸಾಧನೆ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಗುಂಡೂರಾವ್ ಅವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು. ಅವರೆಲ್ಲರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ.