ನವದೆಹಲಿ : ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ಮೇ 16 ರಂದು ನಡೆಯಲಿರುವ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಇದರಲ್ಲಿ ಎಸ್ಸಿಬಿಎಯಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಮೀಸಲಾತಿಯನ್ನ ಜಾರಿಗೆ ತರಲು ಆದೇಶಿಸಲಾಗಿದೆ. ಈ ಚುನಾವಣೆಯಲ್ಲಿ ಖಜಾಂಚಿ ಸ್ಥಾನವನ್ನು ಮಹಿಳೆಯರಿಗೆ ಕಾಯ್ದಿರಿಸುವ ಆದೇಶವೂ ಇದೆ.
ಬಿ.ಡಿ.ಕೌಶಿಕ್ ಪ್ರಕರಣದಲ್ಲಿ ನ್ಯಾಯಾಲಯದ ಹಳೆಯ ತೀರ್ಪನ್ನು ಸ್ಪಷ್ಟಪಡಿಸುವಾಗ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿ ವಿಶ್ವನಾಥನ್ ಅವರ ನ್ಯಾಯಪೀಠ ಈ ಸೂಚನೆಗಳನ್ನ ನೀಡಿದೆ. ನ್ಯಾಯಪೀಠದ ನಿರ್ದೇಶನದಂತೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಇದಲ್ಲದೆ, ಸಂಘದ ಕಾರ್ಯಕಾರಿ ಸಮಿತಿಯ 9 ಸದಸ್ಯರ ಪೈಕಿ 3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು. ಮೇ 16 ರಂದು ನಡೆಯಲಿರುವ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಚುನಾವಣೆಯಲ್ಲಿ ಈ ಆದೇಶವನ್ನ ಮೊದಲ ಬಾರಿಗೆ ಜಾರಿಗೆ ತರಲಾಗುವುದು.
ಸಿಎಂಗೆ ಗಂಡಸ್ತನ ಇದ್ದರೆ ರಾಮನಗರ MLC ವಿರುದ್ಧ ಕ್ರಮ ಕೈಗೊಳ್ಳಲಿ : ವಿವಾದಾತ್ಮಕ ಹೇಳಿಕೆ ನೀಡಿದ ಅರವಿಂದ್ ಬೆಲ್ಲದ