ನವದೆಹಲಿ : ಖ್ಯಾತ ನಟ ಸಯಾಜಿ ಶಿಂಧೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿಲಾಗಿದೆ. ಗುರುವಾರ ಎದೆನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ಪರೀಕ್ಷೆಗಳನ್ನ ನಡೆಸಿದ ವೈದ್ಯರು ನಟನ ಹೃದಯದಲ್ಲಿ ರಕ್ತನಾಳದ ಬ್ಲಾಕ್ ಆಗಿರುವುದನ್ನ ಕಂಡುಕೊಂಡಿದ್ದು, ತಕ್ಷಣವೇ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸಧ್ಯ ಸಯಾಜಿ ಶಿಂಧೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅಂದ್ಹಾಗೆ, ಕೆಲ ದಿನಗಳ ಹಿಂದೆಯೂ ಸಯಾಜಿ ಶಿಂಧೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ಬಂದು ಸಾಮಾನ್ಯ ಪರೀಕ್ಷೆಗಳನ್ನ ಮಾಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇಸಿಜಿ ಪರೀಕ್ಷೆಯ ಪ್ರಕಾರ, 2ಡಿ ಎಕೋಕಾರ್ಡಿಯೋಗ್ರಫಿಯನ್ನು ಪೂರ್ಣಗೊಳಿಸಿದಾಗ, ಹೃದಯದಲ್ಲಿ ರಕ್ತನಾಳದ ಬ್ಲಾಕ್ ಕಂಡುಬಂದಿದೆ. ಇದಾದ ಬಳಿಕ ನಿನ್ನೆ ಮತ್ತೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದ್ದು ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ಸಯಾಜಿ ಶಿಂಧೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಅನ್ಯ ಉದ್ದೇಶಕ್ಕೆ ಕುಡಿಯುವ ನೀರಿನ ಬಳಕೆ : ಈವರೆಗೆ ಎಷ್ಟು ದಂಡ ಸಂಗ್ರಹ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಚಿವ ಈಶ್ವರ್ ಖಂಡ್ರೆ ಸಹೋದರ ಅಧ್ಯಕ್ಷತೆಯ ‘DCC’ ಬ್ಯಾಂಕ್ ಮೇಲೆ ‘IT’ ದಾಳಿ : ದಾಖಲೆ ಪರಿಶೀಲನೆ