ನವದೆಹಲಿ : ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗುವುದು ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಗುರುವಾರ ಪ್ರಕಟಿಸಿದ್ದಾರೆ. ಅದ್ರಂತೆ, ನೂತನ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನವೆಂಬರ್ 11ರಂದು ನಿಗದಿಯಾಗಿದೆ.
Centre notifies the appointment of Justice Sanjeev Khanna as the next Chief Justice of India, effective from November 11th. His appointment follows the retirement of the current Chief Justice DY Chandrachud pic.twitter.com/YO9wniuUsK
— ANI (@ANI) October 24, 2024
ನ್ಯಾಯಮೂರ್ತಿ ಖನ್ನಾ ಅವರು ಈ ದಿನಾಂಕದಿಂದ ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಸಿಜೆಐ ಚಂದ್ರಚೂಡ್ ಅವರು ನವೆಂಬರ್ 10, 2024 ರಂದು ನಿವೃತ್ತರಾಗಲಿದ್ದಾರೆ.
ಅಕ್ಟೋಬರ್ 17 ರಂದು ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಔಪಚಾರಿಕವಾಗಿ ಶಿಫಾರಸು ಮಾಡಿದ್ದರು.
BREAKING : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ ; ಐವರು ಸೈನಿಕರಿಗೆ ಗಾಯ
‘ಮೈಸೂರು ಅರಮನೆ’ ವೀಕ್ಷಣೆಗೆ ತೆರಳುವ ಪ್ರವಾಸಿಗರಿಗೆ ಬಿಗ್ ಶಾಕ್: ನಾಳೆಯಿಂದ ‘ಪ್ರವೇಶ ದರ’ ಹೆಚ್ಚಳ | Mysore Palace