ನವದೆಹಲಿ: ಜನವರಿ 5 ರಂದು ಸಂದೇಶ್ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ನಡೆದ ದಾಳಿಯ ತನಿಖೆಯನ್ನ ಪಶ್ಚಿಮ ಬಂಗಾಳ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಅಂದ್ಹಾಗೆ, ಸಂದೇಶ್ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನ ಕೇಂದ್ರ ತನಿಖಾ ದಳಕ್ಕೆ (CBI) ವರ್ಗಾಯಿಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಸಂದೇಶ್ಖಾಲಿ ಆರೋಪಿ ತೃಣಮೂಲ ಕಾಂಗ್ರೆಸ್ (TMC) ಪ್ರಬಲ ವ್ಯಕ್ತಿ ಶಹಜಹಾನ್ ಶೇಖ್ ಅವರನ್ನ ಸಂಜೆ 4.30 ರೊಳಗೆ ಸಿಬಿಐಗೆ ಹಸ್ತಾಂತರಿಸುವಂತೆ ಕಲ್ಕತ್ತಾ ಹೈಕೋರ್ಟ್ ಬಂಗಾಳ ಪೊಲೀಸರಿಗೆ ಆದೇಶಿಸಿದೆ.
ಸಧ್ಯ ಹೈಕೋರ್ಟ್’ನ ಈ ಆದೇಶವನ್ನ ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
Watch Video : ‘ಹೈದರಾಬಾದ್’ನಲ್ಲಿ ‘ಪ್ರಧಾನಿ ಮೋದಿ’ಗೆ ಅದ್ಧೂರಿ ಸ್ವಾಗತ ; ಮೊಳಗಿದ ‘ಜೈ ಶ್ರೀ ರಾಮ್’ ಘೋಷಣೆ
ಹೀಗೆದೆ ಇಂದು ‘ಬರ ನಿರ್ವಹಣೆ’ ಕುರಿತು ‘ಸಿಎಂ ಸಿದ್ಧರಾಮಯ್ಯ’ ನಡೆಸಿದ ಸಭೆಯ ಹೈಲೈಟ್ಸ್
“ಜೈ ಶ್ರೀರಾಮ್ ಘೋಷಣೆ ಕೂಗಿ ಹಸಿವಿನಿಂದ ಸಾಯುತ್ತೀರಿ” ‘ರಾಹುಲ್ ಗಾಂಧಿ’ ಹೊಸ ವಿವಾದಾತ್ಮಕ ಹೇಳಿಕೆ