ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತನ ಸಿನಿಮಾ ನಿರ್ದೇಶಕ ಪ್ರೇಮ್ ಗೆ ಎಮ್ಮೆ ಕೊಡಿಸುವುದಾಗಿ 4.5 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಖ್ಯಾತ ನಿರ್ದೇಶಕ ಪ್ರೇಮ್ ಅವರಿಗೆ ಎರಡು ಎಮ್ಮೆ ಕೊಡ್ತಿನಿ ಎಂದು 4.5 ಲಕ್ಷ ಹಣ ಪಡೆದು ಆರೋಪಿ ವಂಚನೆ ಮಾಡಿದ್ದಾನೆ. ಇದೀಗ ತಮ್ಮ ಮ್ಯಾನೇಜರ್ ಮೂಲಕ ನಿರ್ದೇಶಕ ಪ್ರೇಮ್ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೈನುಗಾರಿಕೆ ಮಾಡಲು ಎರಡು ಎಮ್ಮೆ ಖರೀದಿಗೆ ಮುಂದಾಗಿದ್ದ ಪ್ರೇಮ್ ಅವರಿಗೆ ಗುಜರಾತ್ ಮೂಲದ ವನರಾಜ್ ಬಾಯ್ ಎಂಬಾತನಿಗೆ ಎಮ್ಮೆ ಖರೀದಿಗೆ ಮುಂಗಡ 25 ಸಾವಿರ ನೀಡಲಾಗಿತ್ತು. ವನರಾಜ್, ವಾಟ್ಸಪ್ ಮೂಲಕ ಎರಡು ಎಮ್ಮೆಗಳ ವಿಡೀಯೋ ಕಳಿಸಿದ್ದ. ಈ ಹಿನ್ನಲೆ ಎಮ್ಮೆ ಬರುತ್ತೆ ಎಂದು ನಂಬಿ 4.5 ಲಕ್ಷ ಹಣವನ್ನೂ ಆನ್ ಲೈನ್ ಮೂಲಕ ಪ್ರೇಮ್ ನೀಡಿದ್ದರು. ಆದರೆ ಒಂದು ವಾರದಲ್ಲಿ ಎಮ್ಮೆ ಕೊಡ್ತಿನಿ ಎಂದವನು ಹಣದೊಂದಿಗೆ ಪರಾರಿ ಆಗಿದ್ದ, ಇದೀಗ ಪೊಲೀಸ್ ಠಾಣೆಗೆ ಪ್ರೇಮ್ ಅವರ ಮ್ಯಾನೇಜರ್ ಚಂದ್ರು ದೂರು ನೀಡಿದ್ದಾರೆ.