ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವಿನ ಆಗಮನದಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹರಿಪ್ರಿಯಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಈ ಖುಷಿಯ ಸುದ್ದಿಯನ್ನು ವಸಿಷ್ಠ ಸಿಂಹ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆ ಆದ ದಿನಾಂಕದಲ್ಲೇ ಗಂಡು ಮಗು ಜನಿಸಿದೆ. ಹೌದು, ಈ ಜೋಡಿಯ ಮದುವೆ ನೆರವೇರಿದ್ದು 2023ರ ಜನವರಿ 26ರಂದು. ಸರಿಯಾಗಿ 2 ವರ್ಷದ ಬಳಿಕ, ಅಂದರೆ 2025ರ ಜನವರಿ 26ರಂದು ಪುತ್ರನ ಆಗಮನ ಆಗಿದೆ. ‘ನಮ್ಮ ಮದುವೆ ದಿನವೇ ಅವನು ಬಂದಿದ್ದಾನೆ’ ಎಂದು ವಸಿಷ್ಠ ಸಿಂಹ ಅವರು ಪೋಸ್ಟ್ ಮಾಡಿದ್ದಾರೆ.