ಮುಂಬೈ:ಬಾಲಿವುಡ್ ನಟ ಸೈಫ್ ಅಲಿ ಖಾನ್ ಜನವರಿ 21 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಕಳ್ಳತನದ ಪ್ರಯತ್ನದ ಸಂದರ್ಭದಲ್ಲಿ ಇರಿತಕ್ಕೊಳಗಾದ ನಂತರ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಲೀಲಾವತಿ ಆಸ್ಪತ್ರೆಯ ಡಾ.ನಿತಿನ್ ಡಾಂಗೆ ಅವರು ಬೆಳಿಗ್ಗೆ ಇದನ್ನು ದೃಢಪಡಿಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಳೆದ ರಾತ್ರಿ ಬಿಡುಗಡೆಗಾಗಿ ದಾಖಲೆಗಳನ್ನು ಸಲ್ಲಿಸಲಾಗಿದೆ. ಇಂದು ಬೆಳಿಗ್ಗೆ 10-ಮಧ್ಯಾಹ್ನ 12 ರ ವೇಳೆಗೆ ನಟನನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಸೈಫ್ ಅವರ ಬಾಂದ್ರಾ ಮನೆಯಲ್ಲಿ ಗುರುವಾರ ದರೋಡೆ ಪ್ರಯತ್ನದ ಸಮಯದಲ್ಲಿ ದರೋಡೆಕೋರ ನಿಂದ ಸುಮಾರು ಆರು ಬಾರಿ ಇರಿತಕ್ಕೊಳಗಾಗಿದ್ದರು. ದಾಳಿಯ ನಂತರ, ಅವರನ್ನು ಮುಂಜಾನೆ 2: 30 ರ ಸುಮಾರಿಗೆ ಆಟೋರಿಕ್ಷಾದಲ್ಲಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು