ನವದೆಹಲಿ: ಯುಎಸ್ ಉದ್ಯೋಗ ದತ್ತಾಂಶದ ನಿರೀಕ್ಷೆಗಿಂತ ಬಲವಾದ ಬೆಳವಣಿಗೆಯ ನಂತರ ರೂಪಾಯಿ ಸೋಮವಾರ ಯುಎಸ್ ಡಾಲರ್ ವಿರುದ್ಧ 86 ರ ಗಡಿ ದಾಟಿ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ.
ಫೆಡರಲ್ ರಿಸರ್ವ್ ಈ ವರ್ಷ ಬಡ್ಡಿದರಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವುದಿಲ್ಲ ಎಂದು ವರದಿ ಸುಳಿವು ನೀಡಿರುವ ಹಿನ್ನಲೆಯಲ್ಲಿ , ರೂಪಾಯಿ ಮೇಲೆ ಒತ್ತಡ ಹೇರಿದೆ. ಇದು 86.2050 ಕ್ಕೆ ಪ್ರಾರಂಭವಾಯಿತು, ಇದು ಶುಕ್ರವಾರದ 85.9650 ಕ್ಕಿಂತ ದುರ್ಬಲವಾಗಿದೆ.