ರಾಯಚೂರು : ರಾಯಚೂರಿನಲ್ಲಿ ರೋಡ್ ರೋಲರ್ ಗೆ ನೇಣು ಬಿಗಿದುಕೊಡು ರಿಮ್ಸ್ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸೂಗೂರಿನ ಹಟ್ಟಿ ಪಟ್ಟಣದಲ್ಲಿ 32 ವರ್ಷದ ಜ್ಯೋತಿ ರೋಡ್ ರೋಲರ್ ಗೆ ನೇಣುಬಿಗಿದುಕೊಂಡ ಶವ ಪತ್ತೆಯಾಗಿದೆ. ಹಟ್ಟಿ-ಪಾಮನಕಲ್ಲೂರು ಗ್ರಾಮದ ರಸ್ತೆ ಕಾಮಗಾರಿ ಬಳಿ ಡಿ.22 ರಂದು ಶವ ಪತ್ತೆಯಾಗಿದೆ.
ಜ್ಞಾನಮೂರ್ತಿ ಎಂಬುವರನ್ನು ಜ್ಯೋತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕೆಲದಿನಗಳಿಂದ ಜ್ಯೋತಿಯನ್ನು ಜ್ಞಾನಮೂರ್ತಿ ಅವಾಯ್ಡ್ ಮಾಡಿದ್ದ. ಇದರಿಂದ ಮನನೊಂದು ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








