ಕಳೆದ ಒಂದು ವರ್ಷದಿಂದ ರಘು ತಾಯಿ ಮಂಜುಳಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇಂದು ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ ಎನ್ನಲಾಗಿದೆ.ಚಿತ್ರದುರ್ಗದ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು, 15 ವರ್ಷಗಳಿಂದ ದರ್ಶನ್ ಅಭಿಮಾನಿಯಾಗಿದ್ದು, ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ರಘೂ ಜೈಲುಪಾಲಾಗಿದ್ದಾನೆ.ಇನ್ನು ತಮ್ಮ ತಾಯಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಇಂದು ನ್ಯಾಯಾಲಯದಲ್ಲಿ ರಘು ಪರ ವಕೀಲರ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದು, ನ್ಯಾಯಾಲಯದಿಂದ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಸಿಕ್ಕರೆ ಆರೋಪಿ ರಘು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾನೆ.