ಬೆಂಗಳೂರು : ಚಿತ್ರದುರ್ಗದ ಹರಿಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಇಂದು ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ15, ಎ16 ಹಾಗೂ ಎ17 ಅರೋಪಿಗಳಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ 10 ದಿನದ ಬಳಿಕ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ನಿನ್ನೆ ಆರೋಪಿಗಳು ನ್ಯಾಯಾಲಯಕ್ಕೆ ಶ್ಯೂರಿಟಿ ಸಲ್ಲಿಸಿದ್ದಾರೆ. ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ಶ್ಯೂರಿಟಿಯನ್ನು ಇದೀಗ ಕೋರ್ಟ್ ಸ್ವೀಕಾರ ಮಾಡಿದೆ. ಶ್ಯೂರಿಟಿ ಸಲ್ಲಿಕೆ ಬಳಿಕ ತುಮಕೂರು ಜೈಲಿನಿಂದ ಬಿಡುಡೆಯಾಗಿದ್ದಾರೆ.
ಕಳೆದ ಸೆಪ್ಟೆಂಬರ್ 23 ರಂದು ರೇಣುಕಾ ಸ್ವಾಮಿ ಕೊಲೆ ಕೇಸ್ ನ ಇಬ್ಬರು ಆರೋಪಿಗಳಾದ ನಿಖಿಲ್ ನಾಯ್ಕ್ ಮತ್ತು ಕಾರ್ತಿಕ್ ಅವರಿಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅದೇ ದಿನ ಮುಂಜಾನೆ ಪ್ರಕರಣದ ಮತ್ತೊಬ್ಬ ಆರೋಪಿ ಕೇಶವ ಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.ಜಾಮೀನು ದೊರೆತಿರುವ ಈ ಮೂವರು ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು, ಆದರೆ ತನಿಖೆಯಲ್ಲಿ ಅವರು ನೇರವಾಗಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಬದಲಾಗಿ, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪ ಹೊರಿಸಲಾಗಿದೆ. ಮೊದಲನೆಯದಾಗಿ ಕೇಶವಮೂರ್ತಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು.
ರೇಣುಕಾಸ್ವಾಮಿ ಶವವನ್ನು ವಿಲೇವಾರಿ ಮಾಡಿ ಕೊಲೆ ನಾವೇ ಮಾಡಿದ್ದು ಎಂದು ಸರೆಂಡರ ಆಗಿದ್ದ ನಿಖಿಲ್ , ಕಾರ್ತಿಕ್, ಹಾಗು ಕೇಶವಮೂರ್ತಿ ಕೋರ್ಟ್ ಜಾಮೀನು ಮಂಜೂರು ಮಾಡಿ 3 ದಿನ ಆದ್ರೂ ಶ್ಯೂರಟಿ ಕೊಡಲು ಯಾರು ಮುಂದೆ ಬರದ ಕಾರಣ ಆರೋಪಿಗಳು ಇನ್ನು ಜೈಲಿನಲ್ಲೇ ಇರುವಂತಾಗಿತ್ತು. ಕೋರ್ಟ್ ಮೂರು ಆರೋಪಿಗಳಿಗೆ ಕಳೆದ ಕೆಲವು ದಿನಗಳ ಹಿಂದೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು.. ಆದರೆ ಇದುವರೆಗೂ ಬಾಂಡ್ ಶ್ಯೂರಿಟಿ ಸೇರಿದಂತೆ ಇನ್ನಿತರ ಕೆಲವು ಕಾನೂನು ಪ್ರಕ್ರಿಯೆಗಳು ಮುಗಿದಿಲ್ಲ ಎನ್ನಲಾಗಿತ್ತು. ಇದೀಗ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ.