ವಿಜಯಪುರ: ಖ್ಯಾತ ಹಿಂದುಸ್ತಾನಿ ಗಾಯಕ ಸಂಜೀವ ಜಹಾಗೀರದಾರ (65) ಮಹಾರಾಷ್ಟ್ರದ ಪುಣೆಯಲ್ಲಿ ನಿಧನರಾಗಿದ್ದಾರೆ.
ಅವಿಭಜಿತ ವಿಜಯಪುರ ಜಿಲ್ಲೆ ಇಳಕಲ್ಲ ಸಮೀಪದ ಬಲಕುಂದಿ ಗ್ರಾಮದವರು. ಸಂಗೀತ ಪರಂಪರೆಯಲ್ಲಿ ಬೆಳೆದಿದ್ದ ಅವರಿಗೆ ವಿಜಯಪುರದ ಖ್ಯಾತ ಸಂಗೀತ ಶಿಕ್ಷಕ ದಿ. ಕೇಶವರಾವ ಥಿಟೆ ಅವರಲ್ಲಿ ಪ್ರಾಥಮಿಕ ಹಂತದಲ್ಲಿ ಸಂಗೀತ ಕಲಿಕೆ ನಡೆಯಿತು.
ಇಂಜಿನಿಯರಿಂಗ್ ಪದವಿ ಶಿಕ್ಷಣ ಪೂರೈಸಿದ ಬಳಿಕ ಪಂಡಿತ ಭೀಮಸೇನ ಜೋಶಿ ಅವರ ಮನೆಯಲ್ಲಿ 12 ವರ್ಷ ಇದ್ದು, ಗುರುಶಿಷ್ಯ ಪರಂಪರೆ ಮುಂದುವರೆಸಿದರು. ದೇಶದ ವಿವಿಧೆಡೆ ಕಾರ್ಯಕ್ರಮ ನೀಡಿದ್ದರು.