ಬೆಂಗಳೂರು : ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಗ್ರೇಡ್-1) ಗ್ರೂಪ್-ಎ ಉಳಿಕೆ ಮೂಲ ವೃಂದದ 30 (29+01 ಸೇವಾನಿರತ) ಮತ್ತು ಹೈದ್ರಾಬಾದ್-ಕರ್ನಾಟಕ ವೃಂದದ 12 (11+01 ಸೇವಾನಿರತ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಕರ್ನಾಟಕ ಲೋಕಸೇವಾ ಆಯೋಗವು ರದ್ದುಗೊಳಿಸಿದೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಗ್ರೇಡ್-1) ಗ್ರೂಪ್-ಎ ಉಳಿಕೆ ಮೂಲ ವೃಂದದ 30 (29+01 ಸೇವಾನಿರತ) ಮತ್ತು ಹೈದ್ರಾಬಾದ್-ಕರ್ನಾಟಕ ವೃಂದದ 12 (11+01 ಸೇವಾನಿರತ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಸಂಖ್ಯೆ: 1640/ಇ(1)/2024-25, ದಿನಾಂಕ:18-09-2024, ತಿದ್ದುಪಡಿ ಅಧಿಸೂಚನೆ: ಸಂಖ್ಯೆ ಪಿಎಸ್‍ಸಿ 2441/ ಇ(1)/ 2024-25, ದಿನಾಂಕ:20-01-2025 ಹಾಗೂ ಅಧಿಸೂಚನೆ ಸಂಖ್ಯೆ: ಪಿಎಸ್‍ಸಿ 1639/ಇ(1)/2024-25, ದಿನಾಂಕ:18-09-2024 ಹಾಗೂ ತಿದ್ದುಪಡಿ ಅಧಿಸೂಚನೆ: ಸಂಖ್ಯೆ ಪಿಎಸ್‍ಸಿ 2440/ಇ/(1)/2024-25, ದಿನಾಂಕ:20-01-2025 ಗಳನ್ನು ಆಯೋಗದಿಂದ ಹೊರಡಿಸಲಾಗಿದ್ದು, ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ (ಲಿಖಿತ) ಪರೀಕ್ಷೆಗಳನ್ನು ದಿನಾಂಕ:24-02-2025, 25-02-2025, 27-02-2025 & 28-02-2025 ರವರೆಗೆ ಹಾಗೂ ಹೈದ್ರಾಬಾದ್-ಕರ್ನಾಟಕ ವೃಂದದ ಹುದ್ದೆಗಳಿಗೆ ಸ್ಪರ್ಧಾತ್ಮಕ (ಲಿಖಿತ) ಪರೀಕ್ಷೆಗಳನ್ನು ದಿನಾಂಕ: 18-03-2025 ರಿಂದ 21-03-2025 ರವರೆಗೆ ನಡೆಸಲಾಗಿರುತ್ತದೆ.
ದಿನಾಂಕ:04-09-2025ರ ಸರ್ಕಾರದ ಸುತ್ತೋಲೆಯಲ್ಲಿ ದಿನಾಂಕ:28-10-2024ರ ಹಿಂದೆ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ದಿನಾಂಕ:28-10-2024ರ ನಂತರ ಸರ್ಕಾರದ ಯಾವುದೇ ಇಲಾಖೆ/ಮಂಡಳಿ/ನಿಗಮ/ಸ್ನಾಯತ್ತ ಸಂಸ್ಥೆಗಳ ಹುದ್ದೆಗಳ ನೇರ ನೇಮಕಾತಿಗಾಗಿ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಗಳು ಯಾವುದಾದರೂ ತಿದ್ದುಪಡಿ ಅಧಿಸೂಚನೆಗಳನ್ನು ಹೊರಡಿಸಿದ್ದಲ್ಲಿ ಅಂತಹ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನೂ ಸಹ ರದ್ದುಗೊಳಿಸಿ, ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಅಳವಡಿಸಿಕೊಂಡು ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕೇಂದೂ ಸಹ ಹಾಗೂ ಕಾಲಬದ್ಧವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ/ಆಯ್ಕೆ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ.
ಸರ್ಕಾರದ ಸುತ್ತೋಲೆಯನ್ವಯ ಹಾಗೂ ಆಯೋಗದ ದಿನಾಂಕ: 05-12-2025ರ ಸಭೆಯಲ್ಲಿ ಸದರಿ ವಿಷಯದ ಕುರಿತು ಆಯೋಗದ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಲಾಗಿ, ದಿನಾಂಕ:04-12-2025ರ ಸರ್ಕಾರದ ಪತ್ರದಲ್ಲಿ ನೀಡಿರುವ ಸೃಷ್ಟಿಕರಣವನ್ನು ಗಮನದಲ್ಲಿಟ್ಟುಕೊಂಡು ಮಾನ್ಯ ಉಚ್ಚ ನ್ಯಾಯಾಲಯವು W.P. ಓo. 12879/2025 ಪ್ರಕರಣದ ಮಧ್ಯಂತರ ಆದೇಶಕ್ಕೊಳಪಟ್ಟು ಸದರಿ ಅಧಿಸೂಚನೆಯನ್ನು ರದ್ದುಪಡಿಸಲು ಅನುಮೋದಿಸಲಾಯಿತು ಎಂದು ನಿರ್ಣಯಿಸಲಾಗಿದೆ.
ಆಯೋಗದ ನಿರ್ಣಯದನ್ವಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು (ಗ್ರೇಡ್-1) ಗ್ರೂಪ್-ಎ ಉಳಿಕೆ ಮೂಲ ವೃಂದದ 30 (29+01 ಸೇವಾನಿರತ) ಮತ್ತು ಹೈದ್ರಾಬಾದ್-ಕರ್ನಾಟಕ ವೃಂದದ 12 (11+01 ಸೇವಾನಿರತ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳನ್ನು ಆಯೋಗದಿಂದ ಹೊರಡಿಸಲಾದ ಅಧಿಸೂಚನೆ/ತಿದ್ದುಪಡಿ ಸಂಖ್ಯೆ: KPSCKA/EXAI/MSCL/23/2025-EXAM-1/544 ಮತ್ತು KPSCKA/EXAI/MSCL/23/2025-EXAM-1//545 ದಿನಾಂಕ:05-12-2025 ರ ಆಯೋಗದ ಅಧಿಸೂಚನೆಗಳಲ್ಲಿ ರದ್ದುಗೊಳಿಸಿ, ಆಯೋಗದ ವೆಬ್‍ಸೈಟ್ http://kpsc.kar.nic.in/Notification ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ








